[t4b-ticker]
ಕ್ರೀಡೆ

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಭಾರತ-ಪಾಕ್‌ ಪಂದ್ಯ ಅ. 15ಕ್ಕೆ?

ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್‌ 15ರಂದು ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಐಸಿಸಿ ಜೊತೆ ಹಂಚಿಕೊಂಡಿದ್ದು ಇಂಡೊ-ಪಾಕ್‌ ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಟೂರ್ನಿಯ ಕರಡನ್ನು ಐಸಿಸಿಯು ಸರಣಿಯಲ್ಲಿ ಭಾಗವಹಿಸುವ ಕ್ರಿಕೆಟ್‌ ತಂಡಗಳ ಮಂಡಳಿಗೆ ಕಳುಹಿಸಲಿದೆ.

ಅಕ್ಟೋಬರ್‌ 5ರಂದು ಅಹಮದಾಬಾದ್‌ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಡುವಿನ ಸರಣಿಯ ಮೊದಲ ಪಂದ್ಯಕ್ಕೆ ವೇದಿಕೆಯಾಗಲಿದ್ದು, ಮೂರು ದಿನಗಳ ಬಳಿಕ ಚೆನ್ನೈನಲ್ಲಿ ಭಾರತವು ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸುವ ಮೂಲಕ ಸರಣಿ ಆರಂಭಿಸಲಿದೆ ಎಂದು ತಿಳಿದು ಬಂದಿದೆ. ಅಹಮದಾಬಾದ್‌ ಕ್ರೀಡಾಂಗಣವು ಒಂದು ಲಕ್ಷ ಪ್ರೇಕ್ಷರನ್ನು ಒಳಗೊಳ್ಳುವ ಸಾಮರ್ಥ್ಯವಿದೆ.

Related Articles

Leave a Reply

Your email address will not be published. Required fields are marked *

Back to top button