[t4b-ticker]
ಕ್ರೀಡೆ

ಫ್ರೆಂಚ್‌ ಓಪನ್‌ ಗೆಲುವಿನೊಂದಿಗೆ 23ನೇ ಗ್ರ್ಯಾಂಡ್‌ ಸ್ಲಾಂ ಗೆದ್ದು ಬೀಗಿದ ಜೊಕೊವಿಕ್‌

ನಾರ್ವೆ ದೇಶದ ನಾಲ್ಕನೇ ಶ್ರೇಯಾಂಕದ ಕ್ಯಾಸ್ಪರ್‌ ರುಡ್‌ ಮಣಿಸುವ ಮೂಲಕ ಸೆರ್ಬಿಯಾದ ನೋವಕ್‌ ಜೊಕೊವಿಕ್‌ ಅವರು ಭಾನುವಾರ ಫೆಂಚ್‌ ಓಪನ್‌ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 23ನೇ ಗ್ರ್ಯಾಂಡ್‌ಸ್ಲಾಂ ಗೆದ್ದು ಫ್ರಾನ್ಸ್‌ನ ರಫೇಲ್‌ ನಡಾಲ್‌ ಅವರನ್ನು ಹಿಂದಿಕ್ಕಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಫೈನಲ್‌ನಲ್ಲಿ 7-6 (1), 6-3, 7-5 ಸೆಟ್‌ಗಳಿಂದ ರುಡ್‌ ಅವರನ್ನು ಮಣಿಸಿದ ಜೊಕೊವಿಕ್‌ ಅವರು 2016, 2021ರ ಬಳಿಕ ರೋಲಂಡ್‌ ಗ್ಯಾರೋಸ್‌ ಟ್ರೋಫಿಯನ್ನು ಗೆದ್ದು ಬೀಗಿದರು.

ಕೆಂಪು ಮಣ್ಣಿನಿಂದ ಕೂಡಿದ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ ಗಾಯಾಳುವಾಗಿದ್ದ ಕಿಂಗ್‌ ಆಫ್‌ ಕ್ಲೇ ಎಂದೇ ಪ್ರಸಿದ್ಧಿಯಾಗಿರುವ ಫ್ರಾನ್ಸ್‌ ನಡಾಲ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಗ್ರ್ಯಾಂಡ್‌ ಸ್ಲಾಂ ಟೂರ್ನಿಯ ಸತತ 21 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆಸ್ಟ್ರೇಲಿಯನ್‌ ಓಪನ್‌, ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಮತ್ತು ಯು ಎಸ್‌ ಓಪನ್‌ ಟೂರ್ನಿಯನ್ನು ತಲಾ ಮೂರು ಬಾರಿ ಗೆದ್ದ ಏಕೈಕ ಆಟಗಾರ ಎಂಬ ಹಿರಿಮೆಗೂ ಜೊಕೋವಿಕ್‌ ಪಾತ್ರರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button