[t4b-ticker]
ದೇಶ/ವಿದೇಶ

ಒಡಿಶಾದಲ್ಲಿ ತ್ರಿವಳಿ ರೈಲು ದುರಂತ: 260ಕ್ಕೂ ಅಧಿಕ ಸಾವು

ಒಡಿಶಾದ ಬಾಲಸೋಲ್‌ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ ಆಘಾತಕ್ಕೆ ಒಳಗಾಗಿ 260ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 1,000ಕ್ಕೂ ಮಂದಿ ಗಾಯಗೊಂಡಿದ್ದಾರೆ. ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ ಮತ್ತು ಶಾಲಿಮರ್-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಹಾಗೂ ಸರಕು ಸಾಗಣೆ ರೈಲುಗಳ ನಡುವೆ ಬಾಲಸೋರ್‌ ಜಿಲ್ಲೆಯ ಬಹನಗರ ಬಜಾರ್‌ ಸ್ಟೇಷನ್‌ ಬಳಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳದಲ್ಲಿ 1,200 ಸಿಬ್ಬಂದಿ, 200೦ ಆಂಬುಲೆನ್ಸ್‌, 50 ಬಸ್‌ಗಳು ಮತ್ತು 45 ಮೊಬೈಲ್‌ ಆರೋಗ್ಯ ಘಟಕಗಳನ್ನು ಸ್ಥಾಪಿಸಲಾಗಿದೆ. ತಜ್ಞ ವೈದ್ಯರು, ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಮುಖರು ಸ್ಥಳದಲ್ಲಿದ್ದು, ಟ್ರ್ಯಾಕ್ಟರ್‌ ಸೇರಿ ಎಲ್ಲಾ ಥರದ ವಾಹನಗಳಲ್ಲಿ ದೇಹಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತಿದೆ.

ದೇಶದಲ್ಲೇ ನಾಲ್ಕನೇ ಅತಿ ದೊಡ್ಡ ದುರಂತ ಇದು ಎಂದು ಹೇಳಲಾಗಿದ್ದು, ಹೌರಾಕ್ಕೆ ತೆರಳುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ನ ಹಲವು ಕೋಚ್‌ಗಳು ಹಳಿ ತಪ್ಪಿ, ಸಮೀದಲ್ಲಿನ ಅಪಘಾತ ಸ್ಥಳಕ್ಕೆ ಉರುಳಿವೆ. ಹೌರಾ ಎಕ್ಸ್‌ಪ್ರೆಸ್‌ನ ಹಳಿ ತಪ್ಪಿದ ಕೋಚ್‌ಗಳು ಶಾಲಿಮರ್-ಚೆನ್ನೈ ಸೆಂಟ್ರಲ್‌ ಕೋರೊಮಂಡಲ್‌ ಎಕ್ಸ್‌ಪ್ರೆಸ್‌ನ ಕೋಚ್‌ಗಳಿಗೆ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಅಪಘಾತದ ತೀವ್ರ ಹೆಚ್ಚಳವಾಗಿದ್ದು, ಸಾವು-ನೋವು ವ್ಯಾಪಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ತಪ್ಪಿದ ಕೋಚ್‌ಗಳ ಅಡಿಯಲ್ಲಿ ಸಿಲುಕಿದ ಮೃತದೇಹಗಳನ್ನು ಗ್ಯಾಸ್‌ ಕಟರ್‌ ಬಳಸಿ ಹೊರತೆಗೆಯಲಾಗಿದೆ. ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯು ಕರ್ತವ್ಯ ನಿರತರಾಗಿದ್ದು, ಅತಿ ಕಿರಿದಾದ ಹಾದಿ ಹೊಂದಿರುವ ರೈಲ್ವೆ ನಿಲ್ದಾಣದಲ್ಲಿ ಪರಿಹಾರ ಕಾರ್ಯವು ಭರದಿಂದ ಸಾಗಿದೆ.

Related Articles

Leave a Reply

Your email address will not be published. Required fields are marked *

Back to top button