[t4b-ticker]
ದೇಶ/ವಿದೇಶ

ಗಂಗಾ ನದಿಗೆ ಪದಕ ಎಸೆಯಲಾಗುವುದು ಎಂದು ಘೋಷಿಸಿದ ಕುಸ್ತಿ ಪಟುಗಳು

ಲೈಂಗಿಕ ಕಿರುಕುಳ ಆರೋಪದ ಮೇಲೆ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿಯ ಲೋಕಸಭಾ ಸದಸ್ಯ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಿರುತ್ತಿರುವ ಖ್ಯಾತ ಕುಸ್ತಿ ಪಟುಗಳು ತಮ್ಮ ಪದಕಗಳನ್ನು ಮಂಗಳವಾರ ಗಂಗಾ ನದಿಗೆ ಎಸೆಯುವುದಾಗಿ ತಿಳಿಸಿದ್ದಾರೆ.

ಆನಂತರ ಇಂಡಿಯಾ ಗೇಟ್‌ ಬಳಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಬ್ರಿಜ್‌ ಭೂಷಣ್‌ ಬಂಧಿಸಬೇಕು ಎಂದು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌, ಬಜರಂಗ್‌ ಪುನಿಯಾ, ವಿನೇಶ್‌ ಪೊಗತ್‌ ಅವರು ಆಗ್ರಹಿಸಿದ್ದಾರೆ. ಸಂಜೆ ಆರು ಗಂಟೆಗೆ ಹರಿದ್ವಾರದಲ್ಲಿ ಗಂಗಾ ನದಿಗೆ ಪದಕಗಳನ್ನು ಎಸೆಯುವ ಮೂಲಕ ಪ್ರತಿಭಟನೆ ದಾಖಲಿಸಿಲು ನಿರ್ಧರಿಸಿದ್ದಾರೆ.

“ಈ ಪದಕಗಳು ನಮ್ಮ ಜೀವನ ಮತ್ತು ಆತ್ಮವಾಗಿವೆ. ಗಂಗಾ ನದಿಗೆ ಅವುಗಳನ್ನು ಎಸೆದ ಬಳಿಕ ಬದುಕುಳಿಯುವುದರಲ್ಲಿ ಅರ್ಥವೇ ಇಲ್ಲ. ಇಂಡಿಯಾ ಗೇಟ್‌ ಬಳಿ ಆಮರಣ ಉಪವಾಸ ನಡೆಸಲಾಗುವುದು” ಎಂದು ಹಿಂದಿಯಲ್ಲಿ ವಿವರಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button