[t4b-ticker]
ರಾಜ್ಯ

ಸಾಲುಮರದ ತಿಮ್ಮಕ್ಕ ಹಸಿರು ರೂವಾರಿಯಾಗಿ ಮುಂದುವರಿಕೆ

ಸಾಲುಮರದ ತಿಮ್ಮಕ್ಕ ಅವರನ್ನು ಹಸಿರು ರೂವಾರಿಯನ್ನಾಗಿ ಮುಂದುವರಿಸಲು ಕರ್ನಾಟಕ ಸರ್ಕಾರ ಆದೇಶಿಸಿದೆ. ಇದರ ಜೊತೆಗೆ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಸಲು ಆದೇಶಿಸಿದೆ.

ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಸಾಲುಮರದ ತಿಮ್ಮಕ್ಕ ಅವರು ಸಿಎಂಗೆ ಆಶೀರ್ವಾದ ಮಾಡಿದ್ದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ 40 ವರ್ಷಕ್ಕೆ ಸಾಯಲು ಬಯಸಿದ್ದರು. ಆನಂತರ ಹುಲಿಕಲ್‌ನವರಾದ ಪತಿ ಬಿಕ್ಕಲ ಚಿಕ್ಕಯ್ಯ ಜೊತೆಗೂಡಿ ಅವರು ಮೊದಲ ವರ್ಷ ನಾಲ್ಕು ಕಿ ಮೀ ರಸ್ತೆಯಲ್ಲಿ ಸಾಲಾಗಿ ಆಲದ ಗಿಡಗಳನ್ನು ನೆಡಲು ಆರಂಭಿಸಿದ್ದರು. ಬರಪೀಡಿತ ಪ್ರದೇಶದಲ್ಲಿ ಅವರು 8,000 ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button