[t4b-ticker]
ಸಿನಿಮಾ

ಸಿಎಂ ಸಿದ್ದುಗೆ ಅಭಿಷೇಕ್‌ ಮದುವೆ ಆಮಂತ್ರಣ ನೀಡಿದ ಸಂಸದೆ ಸುಮಲತಾ

ಪುತ್ರ ಅಭಿಷೇಕ್‌ ಅವರ ಮದುವೆಯು ಅವಿವಾ ಅವರ ಜೊತೆಗೆ ಜೂನ್‌ 5ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರ ಭಾಗವಾಗಿ ಮಂಡ್ಯ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿದರು.

ಈ ಸಂದರ್ಭದಲ್ಲಿ ಸುಮಲತಾ ಅವರ ಜೊತೆಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿ ಎಸ್‌ ಶಿವಣ್ಣ ಅವರು ಹಾಜರಿದ್ದರು.

ಮದುವೆ ಸಮಾರಂಭದಲ್ಲಿ ರಾಜಕಾರಣಿಗಳು, ಸಿನಿಮಾ ಮತ್ತು ಉದ್ಯಮ ಕ್ಷೇತ್ರದವರು ಅಪಾರ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಜೂನ್‌ 7ರಂದು ಮಂಡ್ಯದಲ್ಲಿ ಬೀಗರ ಔತಣ ಕೂಟವನ್ನು ಆಯೋಜಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button