[t4b-ticker]
ರಾಜ್ಯಸರ್ಕಾರಿ ಕಾರ್ನರ್

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ. 4ರಷ್ಟು ಹೆಚ್ಚಳ; ಜನವರಿಯಿಂದಲೇ ಅನ್ವಯ

ಗ್ಯಾರಂಟಿ ಯೋಜನೆಗಳು ಸೇರಿ ಸಂಘಟಿತ ಬಲದ ಮೇಲೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಶೇ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ. ಹಿಂದೆ ಶೇ. 31ರಷ್ಟು ಇದ್ದ ತುಟ್ಟಿ ಭತ್ಯೆಯು ಶೇ. 35ಕ್ಕೆ ಹೆಚ್ಚಳವಾಗಿದೆ.

ಜನವರಿ 1ರಿಂದ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಪೂರ್ವಾನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವುದರಿಂದ ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರಗಳು ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತವೆ. ಜನವರಿ ಮತ್ತು ಜುಲೈನಲ್ಲಿ ಇದರ ಏರಿಕೆಯಾಗುತ್ತದೆ. ಒಂದೊಮ್ಮೆ ಬೇರೆ ತಿಂಗಳಲ್ಲಿ ಘೋಷಣೆಯಾದರೂ ಅದನ್ನು ಪೂರ್ವಾನಯ ಮಾಡಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button