[t4b-ticker]
ರಾಜ್ಯ

ನಾಳೆ ಗ್ಯಾರಂಟಿಗಳ ಬಗ್ಗೆ ಸ್ಪಷ್ಟ ನಿರ್ಣಯ: ಸಚಿವ ಸಂಪುಟದತ್ತ ಎಲ್ಲರ ಚಿತ್ತ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಎರಡನೇ ಮಹತ್ವದ ಸಂಪುಟ ಸಭೆಯು ನಾಳೆ ನಡೆಯಲಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಮತ್ತು ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಬಸ್‌ ಸೌಲಭ್ಯ ಕಲ್ಪಿಸುವ ಯೋಜನೆಗಳ ಜಾರಿಯ ಬಗ್ಗೆ ಸ್ಪಷ್ಟತೆ ದೊರೆಯಲಿದೆ.

ಮೇ ೨೦ರಂದು‌ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸೇರಿದಂತೆ ಎಂಟು ಮಂತ್ರಿಗಳನ್ನು ಒಳಗೊಂಡು ಪದಗ್ರಹಣ ಮಾಡಿದ್ದ ಮೊದಲ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಐದೂ ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಸಂಬಂಧ ಮಾರ್ಗಸೂಚಿ, ಸಾಧಕ-ಬಾಧಕ ಮತ್ತಿತರ ವಿಚಾರಗಳನ್ನು ಒಳಗೊಂಡ ದಾಖಲೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಈ ಮಧ್ಯೆ, ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯದ ಎಲ್ಲಾ ಮಹಿಳೆಯರಿಗೂ ಎಪಿಎಲ್‌/ಬಿಪಿಎಲ್‌ ಎಂದು ವಿಂಗಡಿಸದೇ ಉಚಿತ ಪ್ರಯಾಣ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಎಲ್ಲರ ಚಿತ್ತ ನಾಳೆಯ ಸಂಪುಟ ಸಭೆಯತ್ತ ನೆಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button