[t4b-ticker]
ರಾಜ್ಯ

24 ಹಿರಿ-ಕಿರಿಯ ಶಾಸಕರಿಗೆ ಮಂತ್ರಿ ಪದವಿ; ಸಿದ್ದು ಸಂಪುಟದ 34 ಸ್ಥಾನಗಳೂ ಭರ್ತಿ

ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿರುವ ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದು, ಇಂದು 24 ಹಿರಿ-ಕಿರಿಯ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇದರೊಂದಿಗೆ ಸಂಪುಟದಲ್ಲಿನ ಎಲ್ಲಾ 34 ಸ್ಥಾನಗಳೂ ಭರ್ತಿಯಾದಂತಾಗಿದೆ.

ಸರಿಯಾಗಿ 15 ದಿನಗಳ ಹಿಂದೆ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್‌ ಒಳಗೊಂಡು ಎಂಟು ಮಂದಿ ಸಂಪುಟ ದರ್ಜೆ ಸಚಿವರಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೃಹತ್‌ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದ್ದರು.

ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದಗ ಶಾಸಕ ಎಚ್‌ ಕೆ ಪಾಟೀಲ್‌, ಬ್ಯಾಟರಾಯನಪುರದ ಕೃಷ್ಣ ಭೈರೇಗೌಡ, ನಾಗಮಂಗಲದ ಎನ್‌ ಚೆಲುವರಾಯ ಸ್ವಾಮಿ, ಪಿರಿಯಾಪಟ್ಟಣದ ಕೆ ವೆಂಟಕೇಶ್‌, ಟಿ ನರಸೀಪುರದ ಡಾ. ಎಚ್‌ ಸಿ ಮಹದೇವಪ್ಪ, ಭಾಲ್ಕಿಯ ಈಶ್ವರ ಖಂಡ್ರೆ, ಮಧುಗಿರಿಯ ಕೆ ಎನ್‌ ರಾಜಣ್ಣ, ಗಾಂಧಿನಗರದ ದಿನೇಶ್‌ ಗುಂಡೂರಾವ್‌, ಶಹಾಪುರದ ಶರಣಬಸಪ್ಪ ದರ್ಶನಾಪುರ, ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್‌, ಮುಧೋಳದ ಆರ್‌ ಬಿ ತಿಮ್ಮಾಪುರ, ದಾವಣಗೆರೆ ಉತ್ತರ ಕ್ಷೇತ್ರದ ಎಸ್‌ ಎಸ್‌ ಮಲ್ಲಿಕಾರ್ಜುನ್‌, ಕನಕಗಿರಿಯ ಶಿವರಾಜ್‌ ತಂಗಡಗಿ, ಸೇಡಂನ ಡಾ. ಶರಣಪ್ರಕಾಶ್‌ ಪಾಟೀಲ್‌, ಭಟ್ಕಳದ ಮಂಕಾಳ ವೈದ್ಯ, ಬೆಳಗಾವಿ ಗ್ರಾಮೀಣದ ಲಕ್ಷ್ಮಿ ಹೆಬ್ಬಾಳ್ಕರ್‌, ಬೀದರ್‌ ಉತ್ತರದ ರಹೀಂ ಖಾನ್‌, ಹಿರಿಯೂರಿನ ಡಿ ಸುಧಾಕರ್‌, ಕಲಘಟಗಿಯ ಸಂತೋಷ್‌ ಲಾಡ್‌, ಎನ್‌ ಎಸ್‌ ಬೋಸರಾಜ್‌ (ವಿಧಾನಸಭೆ/ಪರಿಷತ್‌ ಸದಸ್ಯರಲ್ಲ), ಹೆಬ್ಬಾಳದ ಬೈರತಿ ಸುರೇಶ್‌, ಸೊರಬ ಮಧು ಬಂಗಾರಪ್ಪ, ಚಿಂತಾಮಣಿಯ ಡಾ. ಎಂ ಸಿ ಸುಧಾಕರ್‌ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ ನಾಗೇಂದ್ರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Related Articles

Leave a Reply

Your email address will not be published. Required fields are marked *

Back to top button