[t4b-ticker]
ಜಿಲ್ಲೆ

ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಕಚೇರಿ ಆರಂಭಿಸಿದ ಶಾಸಕ ಗಣೇಶ್‌

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್ ಎಂ ಗಣೇಶ ಪ್ರಸಾದ್ ಗುರುವಾರ ಕಚೇರಿ ಆರಂಭಿಸಿದರು.

ಕ್ಷೇತ್ರದಲ್ಲಿ ಇರುವ ಸಂದರ್ಭದಲ್ಲಿ ನಾನು ಕಚೇರಿಯಲ್ಲಿಯೇ ಇದ್ದು ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಚಾಮುಲ್ ನಿರ್ದೇಶಕ ಎಚ್ ಎಸ್ ನಂಜುಂಡಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ ಎಸ್ ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ವೆಂಕಟಾಚಲ, ಮಾಜಿ ಸದಸ್ಯರಾದ ಸುರೇಶ್, ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಬಿ ರಾಜಶೇಖರ್, ಕರ್ನಾಟಕ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ವಿ ನಾ ಚಿದಾನಂದಸ್ವಾಮಿ ಮತ್ತಿತರರು ಇದ್ದರು.

ಇದಕ್ಕೂ ಮುನ್ನ, ಶಾಸಕ ಗಣೇಶ್‌ ಅವರು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಅಹವಾಲು ಆಲಿಸಿದರು.

ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ೧೮ ವರ್ಷದವರೆಗಿನ ಮೂರನೇ ರಾಜ್ಯಮಟ್ಟದ ರಗ್ಬಿ ಫುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ಚಾಮರಾಜನಗರ ಜಿಲ್ಲಾ ಬಾಲಕಿಯರ ತಂಡವನ್ನು ಶಾಸಕ ಗಣೇಶ್‌ ಪ್ರಸಾದ್‌ ಅಭಿನಂದಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾದ ಭರತ್‌ ಕುಮಾರ್‌, ದೊಡ್ಡಪ್ಪಾಜಿ ಆರ್‌, ಚಿಕ್ಕನಾಯಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button