[t4b-ticker]
ಜಿಲ್ಲೆ

ಮಳೆ-ಗಾಳಿಗೆ ಹೆಗ್ಗವಾಡಿಪುರದಲ್ಲಿ ಮನೆ ಕುಸಿತ, ಬೆಳೆಗೆ ಹಾನಿ

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೆಗ್ಗವಾಡಿಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆ, ಗಾಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಹೆಗ್ಗವಾಡಿ ಗ್ರಾಮದ ನಿವಾಸಿಗಳಾದ ಗಿರಿಜಾ, ಮಾದಯ್ಯ, ಪುಟ್ಟಮ್ಮಣ್ಣಿ ಹಾಗೂ ಬಸಪ್ಪ ಎಂಬುವವರಿಗೆ ಸೇರಿದ ಮನೆಗಳು ಕುಸಿದಿವೆ. 5 ವಿದ್ಯುತ್ ಕಂಬಗಳು 5 ತೆಂಗಿನ ಮರಗಳು ಮುರಿದು ಬಿದ್ದಿವೆ.

ಗ್ರಾಮದ ಅಭಿ ಹಾಗೂ ಮನುಕುಮಾರ್ ಎಂಬುವರಿಗೆ ಸೇರಿದ ಸುಮಾರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಕಟ್ಟೆಗಳು ಮುರಿದು  ರೈತರು ನಷ್ಟಕ್ಕೀಡಾಗಿದ್ದಾರೆ.

ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಚ್ ಎನ್ ಶಿವಕುಮಾರ್ ಎಂಬುವರಿಗೆ ಸೇರಿದ ಕೃಷಿ ಯಂತ್ರಧಾರೆ ಮಳಿಗೆಯ ಛಾವಣಿ ಭಾರಿ ಮಳೆಗೆ ಹಾರಿ ಹೋಗಿದ್ದು, ಕುದೇರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ನಾಲ್ಕು ಮರಗಳು ವಿದ್ಯುತ್ ಲೈನ್ ಮೇಲೆ ಬಾಗಿದ ಪರಿಣಾಮದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ನಿವಾಸಿಗಳು ತೊಂದರೆ ಅನುಭವಿಸಿದರು.

Related Articles

Leave a Reply

Your email address will not be published. Required fields are marked *

Back to top button