[t4b-ticker]
ಆರೋಗ್ಯರಾಜ್ಯ

ಬೆಂಗಳೂರು, ಮೈಸೂರು, ಕಲಬುರ್ಗಿಯಲ್ಲಿ 200 ಬಡ ರೋಗಿಗಳಿಗೆ ಉಚಿತ ಸ್ಟಂಟ್‌ ಅಳವಡಿಕೆ

ಹೃದಯ ಸಮಸ್ಯೆ ಎದುರಿಸುತ್ತಿರುವ ಬಡ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿಯಲ್ಲಿ ಜಯದೇವ ಆಸ್ಪತ್ರೆಗಳಲ್ಲಿ 200 ರೋಗಿಗಳಿಗೆ ಆಂಜಿಯೀಪ್ಲಾಸ್ಟಿ ಕಾರ್ಯಾಗಾರವನ್ನು ಜೂನ್‌ 12ರಿಂದ 18ರವರೆಗೆ ಹಮ್ಮಿಕೊಳ್ಳಲಾಗಿದೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಡ್ಟ್ರಾನಿಕ್ಸ್‌, ಅಮೆರಿಕಾ ಹಾಗೂ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಶನ್‌, ಅಮೆರಿಕಾದ ವಿಸ್ಕಿನ್‌ ಸನ್‌ ಸಹಯೋಗದಲ್ಲಿ ಮೂರು ಹಂತದಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

200 ರೋಗಿಗಳಿಗೂ ಉನ್ನತ ಗುಣಮಟ್ಟದ ಸ್ಟಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ. ಈಗಾಗಲೇ ಆಂಜಿಯೋಗ್ರಾಂಗೆ ಒಳಪಟ್ಟಿರುವ ರೋಗಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ರೋಗಿಗಳು ಬಿಪಿಎಲ್‌ ಕಾರ್ಡ್‌ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.

ಬಿಪಿಎಲ್‌ ಅಡಿ ಬರುವ ರೋಗಿಗಳು ಜೂನ್‌ 8ರ ಒಳಗೆ ಬೆಂಗಳೂರು, ಕಲಬುರ್ಗಿ ಮತ್ತು ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ನಿರ್ದೇಶಕರಾದ ಡಾ. ಸಿ ಎನ್‌ ಮಂಜುನಾಥ್‌ ಅವರು ತಿಳಿಸಿದ್ದಾರೆ.

ಬೆಂಗಳೂರು (9480827888, 080 26944874), ಮೈಸೂರು (8660105492, 0821 2263255) ಮತ್ತು ಕಲಬುರ್ಗಿ (9482114611, 08472 230511) ಭಾಗದ ಜನರು ಮೇಲಿನ ಸಂಖ್ಯೆಗಳಿಗೆ ನೋಂದಾಯಿಸಲು ಸಂಪರ್ಕಿಸಬಹುದು.

Related Articles

Leave a Reply

Your email address will not be published. Required fields are marked *

Back to top button