[t4b-ticker]
ದೇಶ/ವಿದೇಶ

ನೂತನ ಸಂಸತ್‌ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸದಿರಲು 19 ವಿರೋಧ ಪಕ್ಷಗಳು ನಿರ್ಧಾರ

ದೇಶ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ಅವರನ್ನು ಬಿಟ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಕಟ್ಟಡವನ್ನು ಮೇ 28ರಂದು ಉದ್ಘಾಟನೆ ಮಾಡಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಡಿಸಿರುವ 19 ವಿರೋಧ ಪಕ್ಷಗಳು ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಿಟ್ಟು ಪ್ರಧಾನಿ ಮೋದಿ ಅವರು ಸಂಸತ್‌ ನೂತನ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಅವಮಾನ ಮಾತ್ರವಲ್ಲ. ಅದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ. ಅಗೌರವಯುತವಾದ ಈ ನಡೆಯು ರಾಷ್ಟ್ರಪತಿ ಕಚೇರಿಗೆ ಅವಮಾನವಾಗಿದ್ದು, ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ದೇಶದ ಮೊದಲ ಆದಿವಾಸಿ ಮಹಿಳೆಯು ಪ್ರಥಮ ಪ್ರಜೆಯಾಗಿಸುವ ಮೂಲಕ ತೋರಲಾಗಿದ್ದ ಒಳಗೊಳ್ಳುವಿಕೆಯನ್ನು ಇದು ಉಲ್ಲಂಘಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಕಾಂಗ್ರೆಸ್‌, ಡಿಎಂಕೆ, ಎಎಪಿ, ಶಿವಸೇನೆ ಉದ್ಧವ ಠಾಕ್ರೆ, ಸಮಾಜವಾದಿ ಪಕ್ಷ, ಸಿಪಿಐ, ಜೆಎಂಎಂ, ಕೇರಳ ಕಾಂಗ್ರೆಸ್‌ (ಮಣಿ), ಆರ್‌ಜೆಡಿ, ಟಿಎಂಸಿ, ಜೆಡಿಯು, ಎನ್‌ಸಿಪಿ, ಸಿಪಿಐ (ಎಂ), ಆರ್‌ಎಲ್‌ಡಿ, ಇಂಡಿಯನ್‌ ಮುಸ್ಲಿಮ್‌ ಲೀಗ್‌, ನ್ಯಾಷನಲ್‌ ಕಾನ್ಫರೆನ್ಸ್‌, ರೆವಲ್ಯೂಷನರಿ ಸೋಷಿಯಲಿಸ್ಟ್‌ ಪಕ್ಷ, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಜಗಂ ಪಕ್ಷಗಳು ಹೇಳಿಕೆಗೆ ಸಹಿ ಮಾಡಿವೆ.

Related Articles

Leave a Reply

Your email address will not be published. Required fields are marked *

Back to top button