[t4b-ticker]
ಜಿಲ್ಲೆ

ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ನಾಳೆ ಗುಂಡ್ಲುಪೇಟೆಗೆ ಗಣೇಶ ಪ್ರಸಾದ್‌ ಭೇಟಿ

ಕರ್ನಾಟಕ ವಿಧಾನಸಭೆ ಸದಸ್ಯರಾಗಿ ಅರ್ಥಾತ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು ಇದೇ ಮೊದಲ ಬಾರಿಗೆ ಮೇ 25ರಂದು ಅಂದರೆ ಗುರುವಾರ ಗುಂಡ್ಲುಪೇಟೆಗೆ ಭೇಟಿ ನೀಡುತ್ತಿದ್ದಾರೆ.

ಇದರಿಂದ ಶಾಸಕ ಗಣೇಶ್‌ ಪ್ರಸಾದ್‌ ಅವರ ಬೆಂಬಲಿಗರು, ಅಭಿಮಾನಿಗಳು ಮತ್ತು ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕರು ಪಡಗೂರಿನ ಅಡವಿಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗೆ ಜನ್ಮದಿನದ ಶುಭಾಶಯ ತಿಳಿಸಲಿದ್ದಾರೆ.

ಆನಂತರ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕರ ಕಚೇರಿ ಉದ್ಘಾಟಿಸಲಿದ್ದಾರೆ. ಆನಂತರ ಮಳೆ ಹಾನಿಗೆ ಒಳಗಾಗಿರುವ ಕೋಡಳ್ಳಿ, ಕೆಬ್ಬೇಪುರ, ಬೆಳವಾಡಿ, ಬಾಚಹಳ್ಳಿ ಮತ್ತು ಅಂಕಹಳ್ಳಿಗೆ ತೆರಳಿ ಜನರ ಸಮಸ್ಯೆ ಆಲಿಸಲಿದ್ದಾರೆ.

ಬೆಂಬಲಿಗರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಾರ-ತುರಾಯಿ ಹಾಕಬಾರದು. ಅದಕ್ಕೆ ವಿನಿಯೋಗಿಸುವ ಹಣವನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಪೆನ್ನು, ನೋಟ್‌ ಪುಸ್ತಕ ಮತ್ತು ಅಗತ್ಯ ಪರಿಕರ ಖರೀದಿಸಲು ಬಳಸುವಂತೆ ಶಾಸಕ ಗಣೇಶ್‌ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button