[t4b-ticker]
ರಾಜ್ಯ

ಕಾಂಗ್ರೆಸ್‌ಗೆ ಭಾರಿ ಗೆಲುವು: 136 ಸ್ಥಾನ ಗೆದ್ದುಬೀಗಿದ ಕೈ ಪಡೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಮೂರು ದಶಕಗಳ ಬಳಿಕ ಇಂಥದ್ದೊಂದು ಮಹತ್ವದ ಗೆಲುವು ದಾಖಲಿಸಿದೆ.

ಬಿಜೆಪಿಯು ಕೇವಲ 65 ಸ್ಥಾನಗಳಿಗೆ ಕುಸಿಯುವ ಮೂಲಕ ಧೂಳೀಪಟವಾಗಿದ್ದು, ಜೆಡಿಎಸ್‌ ಕೇವಲ 19 ಸ್ಥಾನ ಪಡೆಯುವ ಮೂಲಕ ಭಾರಿ ನಿರಾಸೆ ಅನುಭವಿಸಿದೆ. ಅಲ್ಲದೇ, ಅಸ್ತಿತ್ವದ ಪ್ರಶ್ನೆ ಎದುರಿಸುವಂತಾಗಿದೆ. ನಾಲ್ವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಮೊದಲ ಬಾರಿಗೆ ಜನರಿಂದ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ.

೨೦೧೮ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು. ಕಾಂಗ್ರೆಸ್‌ 89 ಸ್ಥಾನ ಪಡೆಯುವ ಮೂಲಕ ವಿರೋಧ ಪಕ್ಷದ ಸ್ಥಾನಕ್ಕೆ ಕುಸಿದಿತ್ತು. ಆದರೂ ಜೆಡಿಎಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದರೂ ಅದು 2019ರ ಲೋಕಸಭಾ ಚುನಾವಣೆಯ ಬಳಿಕ ಪತನಗೊಂಡಿತ್ತು. ಈ ಮಧ್ಯೆ, ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಆಪರೇಷನ್‌ ಕಮಲದ ಮೂಲಕ ಸೆಳೆದ ಬಿಜೆಪಿಯು ಅಧಿಕಾರ ಹಿಡಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button