[t4b-ticker]
ರಾಜ್ಯ

36,675 ಮತಗಳಿಂದ ಭಾರಿ ಗೆಲುವು ದಾಖಲಿಸಿದ ಕಾಂಗ್ರೆಸ್‌ನ ಗಣೇಶ್‌ ಪ್ರಸಾದ್‌

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು 36,675 ಮತಗಳಿಂದ ಭಾರಿ ಅಂತರದ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಪ್ರಥಮ ಬಾರಿಗೆ ಕಣಕ್ಕಿಳಿದಿದ್ದ ಗಣೇಶ್‌ ಪ್ರಸಾದ್‌ ಅವರು 1,07,794 ಮತ ಪಡೆಯುವ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಿ ಎಸ್‌ 71,119 ಮತಗಳನ್ನು ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ. ನಿರಂಜನ್‌ ಕುಮಾರ್‌ ವಿರುದ್ಧ ಸಿಡಿದೆದ್ದು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಕಡಬೂರು ಮಂಜುನಾಥ್‌ ಅವರು 1,850 ಮತ ಪಡೆದಿದ್ದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಂ ಪಿ ಸುನಿಲ್‌ ಅವರು 2,227 ಮತ ಪಡೆದಿದ್ದು, ಯಾವುದೇ ಪ್ರಭಾವ ಬೀರಲು ವಿಫಲರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button