[t4b-ticker]
ಜಿಲ್ಲೆರಾಜ್ಯ

ನಿವೇಶನ ಹಂಚಿಕೆ ಮಾಡಲು ಫಲಾನುಭವಿಗಳಿಂದ ಶಾಸಕ ನಿರಂಜನ್‌ರಿಂದ ಲಂಚ ಮಸೂಲಿ: ಸಿದ್ದರಾಮಯ್ಯ ಆರೋಪ

“ಗುಂಡ್ಲುಪೇಟೆ ಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಮಾಜಿ ಸಚಿವ ಮಹದೇವ ಪ್ರಸಾದ್‌ ಅವರು ಜಮೀನು ಖರೀದಿಸಿದ್ದರು. ಫಲಾನುಭವಿಗಳಿಂದ ಹಾಲಿ ಶಾಸಕ ಸಿ ಎಸ್‌ ನಿರಂಜನ್‌ ಕುಮಾರ್‌ ಅವರು 20 ರಿಂದ 30 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮವನ್ನು ತನಿಖೆ ಮಾಡಿಸಿ, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಲ್ಲದೇ, ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆಯ ಹಿಲ್ಲೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರ ಪರವಾಗಿ ಸೋಮವಾರ ಪಟ್ಟಣದ ನೆಹರೂ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

“ಬಿಜೆಪಿಯ ಸರ್ಕಾರ, ಅವರ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಗುಂಡ್ಲುಪೇಟೆಯ ಶಾಸಕ ಸಿ ಎಸ್‌ ನಿರಂಜನ್‌ ಕುಮಾರ್‌ ಅವರು ಏನೂ ಮಾಡಿಲ್ಲ” ಎಂದು ಹೇಳಿದರು.

“ಗಣೇಶ್‌ ಪ್ರಸಾದ್‌ಗೆ ನೀಡುವ ಒಂದೊಂದು ಮತವೂ ಸಿದ್ಧರಾಮಯ್ಯ ನೀಡುವ ಮತ ಎಂದು ಭಾವಿಸಬೇಕು. ಗಣೇಶ್‌ ಪ್ರಸಾದ್‌ ಅವರ ಜಯ, ನನ್ನ ಜಯ. ಗಣೇಶ್‌ ಪ್ರಸಾದ್‌ ಗೆದ್ದರೆ ನಾನೇ ಗೆದ್ದಂತೆ” ಎಂದು ನೆರೆದಿದ್ದ ಅಪಾರ ಜನಸ್ತೋಮಕ್ಕೆ ಕೋರಿದರು.

“ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸಹಾಯಕರಷ್ಟೇ ಅಲ್ಲದೇ ನನ್ನ ನಂಬಿಕೆಗೆ ಮಹದೇವಪ್ರಸಾದ್‌ ಪಾತ್ರರಾಗಿದ್ದರು. ಅಕಾಲವಾಗಿ ಅವರು ನಿಧನ ಹೊಂದಿದರು. ಆನಂತರ ಗೀತಾ ಮಹದೇವ್‌ ಪ್ರಸಾದ್‌ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಚಿವರನ್ನಾಗಿ ಮಾಡಿದ್ದೇವೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಗಣೇಶ್‌ ಪ್ರಸಾದ್‌ ಅವರಿಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದ್ದೇನೆ” ಎಂದರು.

“ಕೋವಿಡ್‌ ಸಂದರ್ಭದಲ್ಲಿ ಗಣೇಶ್‌ ಪ್ರಸಾದ್‌ ಉತ್ತಮ ಕೆಲಸ ಮಾಡಿದ್ದಾರೆ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಇಂಥವರು ರಾಜಕೀಯದಲ್ಲಿ ಉಳಿಯಬೇಕು. ಹೀಗಾಗಿ, ಅವರಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು” ಎಂದು ಕೋರಿದರು.

Related Articles

Leave a Reply

Your email address will not be published. Required fields are marked *

Back to top button