[t4b-ticker]
ಜಿಲ್ಲೆರಾಜ್ಯ

ಪುತ್ರನ ಪರವಾಗಿ ಸೆರಗೊಡ್ಡಿ ಮತಭಿಕ್ಷೆ ಬೇಡಿದ ಮಾಜಿ ಸಚಿವೆ ಗೀತಾ ಮಹದೇವ ಪ್ರಸಾದ್

“ಅಧಿಕಾರ ಇದ್ದರೆ ಸಹಾಯ ಮಾಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಅಧಿಕಾರ ಇಲ್ಲದಿದ್ದರೂ ಗಣೇಶ್‌ ಸಹಾಯ ಮಾಡಿದ್ದಾನೆ. ನಾನು ಸೆರಗೊಡ್ಡಿ ನಿಮ್ಮಲ್ಲಿ ಮತಭಿಕ್ಷೆ ಬೇಡುತ್ತಿದ್ದೇನೆ. ಒಮ್ಮೆ ಅವನನ್ನು ಗೆಲ್ಲಿಸಿ ನೋಡಿ. ನೀವು ಎಂದೂ ಪಶ್ಚಾತಾಪ ಪಡುವುದಿಲ್ಲ” ಎಂದು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಂಡ ಗೀತಾ ಮಹದೇಶವಪ್ರಸಾದ್‌ ಅವರು ಮನವಿ ಮಾಡಿದರು.

ವಿಧಾನಸಭೆ ಚುನಾವಣೆಯ ಹಿಲ್ಲೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರ ಪರವಾಗಿ ಸೋಮವಾರ ಪಟ್ಟಣದ ನೆಹರೂ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

“ನನ್ನ ಮಗ ಗಣೇಶ್‌ಪ್ರಸಾದ್‌ ಅವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ನಮ್ಮಲ್ಲಿ ಇಷ್ಟು ಹಣವಿದೆ. ಇಷ್ಟೆಲ್ಲಾ ವೈಭೋಗ ಇದೆ. ಆದರೆ, ನಾವು ನಮ್ಮ ಡ್ಯಾಡಿಯನ್ನು ಉಳಿಸಿಕೊಳ್ಳಲಾಯಿತೇ ಅಮ್ಮಾ. ನಮಗೆ ಮೂರು ಬಾರಿ ಊಟ ಮಾಡಲು ಹಣವಿದೆ. ಇರಲು ಮನೆಯಿದೆ. ಜೀವನ ಮಾಡಲು ಸ್ವಲ್ಪ ಹಣ ಇಟ್ಟುಕೊಳ್ಳೋಣ. ಉಳಿದೆಲ್ಲಾ ಹಣವನ್ನು ಜನರ ಸೇವೆಗೆ ಮೀಸಲಿಡೋಣ ಎಂದು ಹೇಳಿದ. ಕೊರೊನ ಸಂದರ್ಭದಲ್ಲಿ ಸಾವನ್ನಪ್ಪಿದ ಕುಟುಂಬಗಳ ಮನೆಗೆ ಹೋಗಿ ಬಂದ ನಂತರ ಗಣೇಶ್‌ ಕಣ್ಣೀರು ಹಾಕುತ್ತಿದ್ದ. ಜನರ ನೋವು ನೆನೆದು ತುಂಬಾ ಬೇಸರಗೊಂಡಿದ್ದ” ಎಂದು ಗಣೇಶ್‌ ಪ್ರಸಾದ್‌ ಬಗ್ಗೆ ಮರುಕ ವ್ಯಕ್ತಪಡಿಸಿದರು.

“ಸಿದ್ದರಾಮಯ್ಯ ಅವರನ್ನು ಎಂದೂ ಮರೆಯಲಾಗದು. ನನ್ನನ್ನು ಶಾಸಕಿ ಮಾಡಿ, ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆಯನ್ನಾಗಿ ಮಾಡಿದರು. ಎಲ್ಲಾ ರೀತಿಯಲ್ಲೂ ಅವರು ಬೆಂಬಲವಾಗಿ ನಿಂತಿದ್ದಾರೆ. ಈಗ ನಮ್ಮ ಕೋರಿಕೆಗೆ ಓಗೊಟ್ಟು ಮತಯಾಚನೆ ಮಾಡಲು ಬಂದಿದ್ದಾರೆ” ಎಂದರು ಕೃತಜ್ಞತೆ ಸಲ್ಲಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಗಣೇಶ್‌ ಪ್ರಸಾದ್‌ ಅವರು “ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ಈ ದುರಾಡಳಿತಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಮೈಮರೆಯದೇ ಮುಂದಿನ ಎರಡು ದಿನ ಕೆಲಸ ಮಾಡಬೇಕು” ಎಂದು ಕೋರಿದರು.

Related Articles

Leave a Reply

Your email address will not be published. Required fields are marked *

Back to top button