[t4b-ticker]
ರಾಜ್ಯ

ಕೇಂದ್ರದ ಯೋಜನೆಗಳಿಗೆ ಕೊಕ್ಕೆ ಆರೋಪ: ನಡ್ಡಾ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಜನ ಕಲ್ಯಾಣ ಮತ್ತು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುತ್ತದೆ ಎಂದು ಜನರಲ್ಲಿ ಭೀತಿ ಉಂಟು ಮಾಡಿ, ತಪ್ಪು ಭಾವನೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ವಿರುದ್ಧ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಸೋಮವಾರ ದೂರು ನೀಡಿದೆ.

ಸಂಸದರೂ ಆಗಿರುವ ನಡ್ಡಾ ಅವರ ವಿರುದ್ಧ ಲಂಚ, ಪ್ರಲೋಭನೆ ಮತ್ತು ಸುಳ್ಳು ಹೇಳಿಕೆ ನೀಡದ ಆರೋಪದ ಅಡಿ ಪ್ರಕರಣ ದಾಖಲಿಸಬೇಕು. ಈ ರೀತಿ ಹೇಳಿಕೆ ನೀಡಿದಂತೆ ಅವರನ್ನು ನಿರ್ಬಂಧಿಸಬೇಕು ಎಂದು ಕೆಪಿಸಿಸಿ ಪ್ರಧಾನ ವಕ್ತಾರ ಎ ಎನ್‌ ನಟರಾಜ್‌ ಗೌಡ, ಕಾನೂನು ಕೋಶದ ಕಾರ್ಯದರ್ಶಿ ಸಂಜಯ್‌ ಯಾದವ್‌, ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌, ಉಪಾಧ್ಯಕ್ಷ ದಿವಾಕರ್‌ ನಾರಾಯಣಸ್ವಾಮಿ ಅವರು ದೂರು ನೀಡಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಭಾನುವಾರ ಬಿಜೆಪಿ ಅಭ್ಯರ್ಥಿ ಕರುಣಾಕರ ರೆಡ್ಡಿ ಪರವಾಗಿ ನಡ್ಡಾ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅವರು “ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಕೆಲಸಗಳನ್ನು ನಿಲ್ಲಿಸುತ್ತದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ನಿಲ್ಲಿಸಲಾಗುತ್ತದೆ. ಪಿಎಂ ಆವಾಸ್‌ ಯೋಜನೆಯಡಿ ನಿಮಗೆ ಮನೆ ಸಿಗುವುದಿಲ್ಲ. ರಸ್ತೆ ರಿಪೇರಿ ಕೆಲಸ ನಿಲ್ಲಲಿದೆ. ಆಗ ಹೊಸ ರಸ್ತೆ ನಿರ್ಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದಿದ್ದರು.

Related Articles

Leave a Reply

Your email address will not be published. Required fields are marked *

Back to top button