[t4b-ticker]
ರಾಜ್ಯ

ಸುದೀಪ್ ಮೂರು ತಾಸಿನ ನಾಯಕ: ಸತೀಶ್ ಜಾರಕಿಹೊಳಿ

“ನಟ ಸುದೀಪ್‌ ಅವರು ಅಳುವುದಕ್ಕೂ, ನಗುವುದಕ್ಕೂ ದುಡ್ಡು ತೆಗೆದುಕೊಳ್ಳುತ್ತಾರೆ. ಅವರು ಮೂರು ತಾಸಿನ ನಾಯಕರು. ಆದರೆ, ನಾವು ನಿರಂತರವಾಗಿ ನಿಮ್ಮ ಸೇವೆ ಮಾಡುವವರು. ಬಿಸಿಲು ಮತ್ತು ಮಳೆಯಲ್ಲಿ ನಿಂತು ಕೆಲಸ ಮಾಡುವವರನ್ನು ನೀವು ನೋಡಬೇಕು” ಎಂದು ಕೆಪಿಸಿಸಿ ಕಾರ್ಯಾದಕ್ಷ ಸತೀಶ್‌ ಜಾರಕಿಹೊಳಿ ಛೇಡಿಸಿದರು.

ವಿಧಾನಸಭೆ ಚುನಾವಣೆಯ ಹಿಲ್ಲೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರ ಪರವಾಗಿ ಸೋಮವಾರ ಪಟ್ಟಣದ ನೆಹರೂ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

“ನಟ ಸುದೀಪ್‌ ಅವರ ಸಿನಿಮಾಗಳಿಗೆ ಜನರು ದುಡ್ಡು ಕೊಟ್ಟು ನೋಡುತ್ತಿದ್ದರು. ಈಗ ಅವರನ್ನು ಉಚಿತವಾಗಿ ನೋಡುವಂತಾಗಿದೆ. ರಾಜಕೀಯ ಮೂರು ಗಂಟೆಯ ಸಿನಿಮಾದ ರೀತಿಯಲ್ಲ” ಎಂದರು.

ಬಿಜೆಪಿಯ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಈ ನಿಟ್ಟಿನಲ್ಲಿ ಗಣೇಶ್‌ ಪ್ರಸಾದ್‌ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button